Saturday, July 11, 2009

ಎದೆ ತುಂಬಿ ಹಾಡಿದೆನು ಅಂದು ನಾನು

ಈ ಹಾಡನ್ನು ನಾನು ಮೊದಲ ಬಾರಿ Milpitas ನಲ್ಲಿ ಸುಮಾರು ೨೦೦೦ರಲ್ಲಿ ಕೇಳಿದೆ. ಅನಂತಸ್ವಾಮಿ ಅವರು ಅಲ್ಲಿಗೆ ಭೇಟಿ ಕೊಟ್ಟಿದ್ದರು. ಇದನ್ನು ಕೇಳಿ ಬಹಳಾ ಸಂತೋಷವಾಯಿತು. (ಯಾಕೆಂದರೆ, ಅಮೆರಿಕಾಗೆ ಬಂದಮೇಲೆ, ಕನ್ನಡ ಹಾಡುಗಳು infrequent ಆಗಿತ್ತು). ಈ ಹಾಡಿನ ಜ್ಞಾಪಕ ಈಗ ಸುಮಾರು ದಿವಸಗಳ ಹಿಂದೆ ಬಂತು. ಆದ್ದರಿಂದ ಇದರ ಸಾಹಿತ್ಯವನ್ನು ಇಲ್ಲಿ ಕೊಟ್ಟಿದ್ದೇನೆ. ಓದಿ, ಕೇಳಿ, ಸಂತೋಷಪಡಿ.
(ಇದೇ ಸಾಹಿತ್ಯವನ್ನು ಬೇರೆ ಜಾಗಗಳಲ್ಲೂ ನೋಡಬಹುದು; ಇದು ಒಂದು ಉದಾಹರಣೆ. ಇಲ್ಲಿ ಪುನಃ ಕೊಟ್ಟಿರುವ ಕಾರಣ: ನನಗೆ ಇಲ್ಲಿರುವುದನ್ನು ನೋಡಿಕೊಂಡು ಹಾಡುವುದು ಹೆಚ್ಚಿಗೆ ಸುಲಭ).
 


... ♫ ♫ ♫ ♫ ...
ಎದೆ ತುಂಬಿ ಹಾಡಿದೆನು ಅಂದು ನಾನು

... ♫ ♫ ♫ ♫ ...
ಎದೆ ತುಂಬಿ ಹಾಡಿದೆನು ಅಂದು ನಾನು
ಎದೆ ತುಂಬಿ ಹಾಡಿದೆನು ಅಂದು ನಾನು
ಮನವಿಟ್ಟು ಕೇಳಿದಿರಿ ಅಲ್ಲಿ ನೀವು
ಎದೆ ತುಂಬಿ ಹಾಡಿದೆನು ಅಂದು ನಾನು

... ♫ ♫ ♫ ♫ ...
ಇಂದು ನಾ ಹಾಡಿದರೂ ಅಂದಿನಂತೆಯೇ ಕುಳಿತು
ಕೇಳುವಿರಿ ಸಾಕೆನಗೆ ಅದುವೆ ಬಹುಮಾನ
ಹಾಡುಹಕ್ಕಿಗೆ ಬೇಕೆ ... ಆ ...
ಹಾಡುಹಕ್ಕಿಗೆ ಬೇಕೆ ಬಿರುದು ಸನ್ಮಾನ

... ♫ ♫ ♫ ♫ ...
[ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ
ಹಾಡುವುದು ಅನಿವಾರ್ಯ ಕರ್ಮ ನನಗೆ] - 2
ಕೇಳುವವರಿಹರೆಂದು ... ಆ ...
ಕೇಳುವವರಿಹರೆಂದು ... ನಾ ಬಲ್ಲೆ
ಅದರಿಂದ ಹಾಡುವೆನು ಮೈದುಂಬಿ ಎಂದಿನಂತೆ
ಯಾರು ಕಿವಿ ಮುಚ್ಚಿದರೂ, ಯಾರು ಕಿವಿ ಮುಚ್ಚಿದರೂ, ನನಗಿಲ್ಲ ಚಿಂತೆ ...
ಎದೆ ತುಂಬಿ, ಮನ ತುಂಬಿ, ತನು ತುಂಬಿ, ಹಾಡಿದೆನು ಅಂದು ನಾನು ... ನಾನು

No comments: